ಪದೇ ಪದೇ ಕೇಳಲಾಗುವ ಪ್ರಶ್ನೆಗಳು
-
ಸಾಮಾನ್ಯ ಕೂಲಿಂಗ್ ಸಲಹೆಗಳು
-
ನಿರ್ವಹಣೆ ವಿಚಾರಣೆ
-
ಟ್ರಬಲ್‌ಶೂಟಿಂಗ್ (ರಿಪೇರಿ) ಮಾರ್ಗದರ್ಶಿ
-
ಸುರಕ್ಷತೆ ಮತ್ತು ವಾರಂಟಿ
Any other Questions? We have answers
Contact usಸಾಮಾನ್ಯ ಕೂಲಿಂಗ್ ಸಲಹೆಗಳು
-
A. ಏರ್ ಕೂಲರ್ಗಳು ಹೇಗೆ ಕಾರ್ಯನಿರ್ವಹಿಸುತ್ತವೆ?
ಬೆಚ್ಚಗಿನ ಗಾಳಿಯು ಉಷಾ ಏರ್ ಕೂಲರ್ ಒಳಗೆ ಎಳೆಯಲ್ಪಟ್ಟಾಗ, ಅದು ಒದ್ದೆಯಾದ ಹನಿಕೂಂಬ್ ಕೂಲಿಂಗ್ ಮಾಧ್ಯಮದ ಮೂಲಕ ಹಾದುಹೋಗುತ್ತದೆ. ಇದು ಹನಿಕೂಂಬ್ ಮೂಲಕ ಹಾದುಹೋಗುವಾಗ, ಹನಿಕೂಂಬ್ ಮೇಲೆ ಹರಿಯುವ ನೀರು ಗಾಳಿಯಿಂದ ಶಾಖವನ್ನು ಹೀರಿಕೊಳ್ಳುತ್ತದೆ ಮತ್ತು ಇದರಿಂದಾಗಿ ನೀರು ಆವಿಯಾಗುತ್ತದೆ. ಇದು ತಂಪಾದ, ಮಾಯ್ಶ್ಚರೈಸ್ಡ್ ಗಾಳಿಗೆ ಕಾರಣವಾಗುತ್ತದೆ. ನಂತರ ಶಕ್ತಿಯುತ ಫ್ಯಾನ್ ತಂಪಾದ ಗಾಳಿಯನ್ನು ಕೋಣೆಗೆ ತಳ್ಳುತ್ತದೆ. ಇದರ ಫಲಿತಾಂಶದಿಂದಾಗಿ ತಾಜಾ, ಮಾಯ್ಶ್ಚರೈಸ್ಡ್, ತಂಪಾದ ನಿರಂತರ ಗಾಳಿಯ ಹರಿವು ಒದಗುತ್ತದೆ ಮತ್ತು ಹಳೆಯ ಮತ್ತು ವಾಸನೆ ಇರುವ ಗಾಳಿಯು ಕೋಣೆಯಿಂದ ತೆರೆದ ಕಿಟಕಿ ಅಥವಾ ಬಾಗಿಲಿನ ಮೂಲಕ ಹೊರಕ್ಕೆ ಹಾಕಲ್ಪಡುತ್ತದೆ.
-
B. ಏರ್ ಕೂಲರ್ಗಳು ಮತ್ತು ಏರ್ ಕಂಡೀಶನರ್ ಗಳ ನಡುವಿನ ವ್ಯತ್ಯಾಸವೇನು?
- ಏರ್ ಕಂಡೀಶನರ್ ಗಳಲ್ಲಿ ಒಂದು ರಾಸಾಯನಿಕ ಕೂಲಿಂಗ್ ರೆಫ್ರಿಜರೆಂಟ್ ಅಗತ್ಯವಿರುತ್ತದೆ ಮತ್ತು ಬಿಸಿ ಗಾಳಿಯನ್ನು ತಂಪಾದ ಗಾಳಿಯಾಗಿ ಬದಲಾಯಿಸಲು, ವಿದ್ಯುತ್-ಬಳಸುವ ಕಂಪ್ರೆಸ್ಸರ್ ಮೂಲಕ ಹೀರಿಕೊಂಡು ಕಂಡೆನ್ಸ್ ಮಾಡಲಾಗುತ್ತದೆ. ಬಿಸಿ ಗಾಳಿಯನ್ನು ಕೋಣೆಯ ಹೊರಗೆ ಬಿಡಬೇಕಾಗುತ್ತದೆ. ಏರ್ ಕಂಡೀಶನರ್ ಗಳ ಹೆಚ್ಚು ಸಂಕೀರ್ಣವಾದ ಸಂಯೋಜನೆಯು, ಅವುಗಳನ್ನು ಖರೀದಿಸಲು ದುಬಾರಿಯನ್ನಾಗಿ ಮಾಡುತ್ತದೆ ಮತ್ತು ಬಳಕೆಯ ಸಮಯದಲ್ಲಿ ಅವು ಗಮನಾರ್ಹವಾಗಿ ಹೆಚ್ಚಿನ ವಿದ್ಯುತ್ ಅನ್ನು ಬಳಸುತ್ತವೆ.
- ಒಳಬರುವ ಬೆಚ್ಚಗಿನ ಗಾಳಿಯನ್ನು ತಂಪಾಗಿಸಲು ಏರ್ ಕೂಲರ್ಗಳು ನೀರಿನ ಆವಿಯಾಗುವಿಕೆಯ ನೈಸರ್ಗಿಕ ಪ್ರಕ್ರಿಯೆಯನ್ನು ಬಳಸುತ್ತವೆ ಮತ್ತು ಹೊಸದಾಗಿ ತಂಪಾಗುವ ಗಾಳಿಯನ್ನು ಹೊರಹಾಕಲು ಶಕ್ತಿಯುತವಾದ ಫ್ಯಾನ್ ಅನ್ನು ಬಳಸುತ್ತವೆ. ದ್ರವ ನೀರು ನೀರಿನ ಆವಿಯಾಗಿ (ಆವಿಯಾಗುವಿಕೆಯ ಮೂಲಕ) ರೂಪಾಂತರಗೊಂಡಾಗ ಒಣ ಗಾಳಿಯ ಉಷ್ಣತೆಯು ಗಮನಾರ್ಹವಾಗಿ ಇಳಿಯಬಹುದು.
-
C. ಉಷಾ ಏರ್ ಕೂಲರ್‌ನ ಪ್ರಯೋಜನವೇನು?
i. ಕಡಿಮೆ ಖರೀದಿ ವೆಚ್ಚ
ಉಷಾ ಎವಾಪೊರೇಟಿವ್ ಏರ್ ಕೂಲರ್ಗಳು ಬಜೆಟ್ ಸ್ನೇಹಿ ಕೂಲಿಂಗ್ ಆಯ್ಕೆಯಾಗಿದೆ ಏಕೆಂದರೆ ಅವುಗಳನ್ನು ಕೈಗೆಟುಕುವ ಬೆಲೆಯಲ್ಲಿ ಖರೀದಿಸಬಹುದು ಮತ್ತು ಕಾರ್ಯನಿರ್ವಹಿಸಲು ಸುಲಭವಾಗಿದೆ.
ii. ಕಡಿಮೆ ವಿದ್ಯುತ್ ಬಳಕೆ
ಉಷಾ ಎವಾಪೊರೇಟಿವ್ ಏರ್ ಕೂಲರ್ಗಳು ಕಡಿಮೆ ವಿದ್ಯುತ್ ಬಳಸುತ್ತವೆ. ಏರ್ ಕೂಲರ್ ಅನ್ನು ಬಳಸಲು ಏರ್ ಕಂಡೀಶನರ್ ಅನ್ನು ಬಳಸುವುದಕ್ಕಿಂತ ಬಹಳ ಕಡಿಮೆ ವಿದ್ಯುತ್ ಅಗತ್ಯವಿರುತ್ತದೆ, ಇದರಿಂದಾಗಿ ವಿದ್ಯುತ್ ವೆಚ್ಚ ಹೆಚ್ಚಿರುವ ನಗರಗಳಲ್ಲಿ ಇವುಗಳು ಆಕರ್ಷಕವಾದ ತಂಪಾಗಿಸುವ ಮಾಧ್ಯಮವಾಗಿವೆ.
-
D. ನನ್ನ ಉಷಾ ಏರ್ ಕೂಲರ್‌ನ ಪ್ರಭಾವವನ್ನು ಹೆಚ್ಚಿಸುವುದು ಹೇಗೆ?
i. ಕಡಿಮೆ ಹ್ಯುಮಿಡಿಟಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ
ಗರಿಷ್ಠ ರಿಲೆಟಿವ್ ಹ್ಯುಮಿಡಿಟಿ 60% ಅಥವಾ ಅದಕ್ಕಿಂತ ಕಡಿಮೆ ಇರುವ ಪ್ರದೇಶಗಳಲ್ಲಿ ಎವಾಪೊರೇಟಿವ್ ಏರ್ ಕೂಲರ್ಗಳು ಹೆಚ್ಚು ಪರಿಣಾಮಕಾರಿಯಾಗಿವೆ. ಹೆಚ್ಚು ಪರಿಣಾಮಕಾರಿಯಾದ ಎವಾಪೊರೇಟಿವ್ ಕೂಲಿಂಗ್ ಗಾಗಿ ಬೆಚ್ಚಗಿನ, ಒಣ ಗಾಳಿ ಮುಖ್ಯವಾಗಿದೆ ಮತ್ತು ಒಣ ಪರಿಸರದಲ್ಲಿ ತಾಪಮಾನ ಇಳಿಕೆ ಹೆಚ್ಚಾಗಿರುತ್ತದೆ ಏಕೆಂದರೆ ಹ್ಯುಮಿಡಿಟಿ ಕಡಿಮೆಯಾದಾಗ ಹೆಚ್ಚಿನ ಆವಿಯಾಗುವಿಕೆ ಸಂಭವಿಸುತ್ತದೆ. ಎವಾಪೊರೇಟಿವ್ ಏರ್ ಕೂಲರ್ಗಳು ತೇವಾಂಶವನ್ನು ಉತ್ಪತ್ತಿ ಮಾಡುತ್ತವೆ ಮತ್ತು ಕೋಣೆಯಲ್ಲಿ ಹ್ಯುಮಿಡಿಫೀಕೇಶನ್ ಹೆಚ್ಚಿಸಲು ಇದನ್ನು ಬಳಸಬಹುದು. ತಂಪಾದ ಗಾಳಿಯನ್ನು ಕಾಪಾಡಿಕೊಳ್ಳಲು ಮತ್ತು ಒಣ ಪ್ರದೇಶಗಳಲ್ಲಿರುವ ಮನೆಗಳಲ್ಲಿ ಆರಾಮವನ್ನು ಹೆಚ್ಚಿಸಲು ಅವು ಸೂಕ್ತವಾಗಿವೆ
ii. ಏರ್ ಕೂಲರ್ಗಳಿಗೆ ಕ್ರಾಸ್ ವೆಂಟಿಲೇಷನ್ ಅಗತ್ಯವಿದೆ
ಎವಾಪೊರೇಟಿವ್ ಏರ್ ಕೂಲರ್ಗಳನ್ನು ಸುತ್ತ ಜಾಗವಿಲ್ಲದ ಸ್ಥಳಗಳಲ್ಲಿ ಬಳಸಬಾರದು. ಗಾಳಿಯ ಮುಕ್ತ ಹರಿವನ್ನು ಅನುಕೂಳಿಸಲು ಬಾಗಿಲು ಮತ್ತು ಕಿಟಕಿಗಳನ್ನು ತೆರೆಯಬೇಕು. ತೆರೆದ ಕಿಟಕಿಯ ಬಳಿ ಇರಿಸಿದಾಗ, ಹೊರಗಿನ ಗಾಳಿಯನ್ನು ಸೆಳೆಯುವಾಗ ಮತ್ತು ಕಿಟಕಿ ಅಥವಾ ಬಾಗಿಲಿನ ಮೂಲಕ ಗಾಳಿಯು ನಿರ್ಗಮಿಸುವಂತೆ ಮಾಡುವ ಮೂಲಕ, ಕೋಣೆಯಲ್ಲಿ ಗಾಳಿಯನ್ನು ಹರಡುವ ಮೂಲಕ ಏರ್ ಕೂಲರ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಒಬ್ಬ ವ್ಯಕ್ತಿಯು ಏರ್ ಕೂಲರ್ನಿಂದ ಹೊರಬರುವ ಏರ್ ಫ್ಲೋ ಸಮೀಪದಲ್ಲಿರುವಾಗ ಗರಿಷ್ಠ ತಂಪಾಗಿಸುವಿಕೆಯ ಪರಿಣಾಮವನ್ನು ಅನುಭವಿಸಲಾಗುತ್ತದೆ.
-
E. ಹನಿಕೂಂಬ್ ಎಂದರೇನು?
ಏರ್ ಕೂಲರ್ನಲ್ಲಿರುವ ಹನಿಕೂಂಬ್ ಎವಾಪೊರೇಟಿಂಗ್ ಕೂಲಿಂಗ್ ಪ್ಯಾಡ್ಗಳು ಗಾಳಿಯು ಹಾದುಹೋಗುವಂತೆ ನೀರನ್ನು ಹಿಡಿದಿಟ್ಟುಕೊಳ್ಳುವ ವಿಶೇಷ ಮಾಧ್ಯಮವಾಗಿದೆ. ಈ ಪ್ಯಾಡ್ಗಳ ವಿನ್ಯಾಸವು ಹನಿಕೂಂಬ್ (ಜೇನುಗೂಡಿನ) ರಚನೆಯನ್ನು ಹೋಲುತ್ತದೆ, ಆದ್ದರಿಂದ ಈ ಹೆಸರುನ್ನು ನೀಡಲಾಗಿದೆ. ಸಾಂಪ್ರದಾಯಿಕ ವುಡ್ ವುಲ್ ಕೂಲಿಂಗ್ ಪ್ಯಾಡ್ಗಳಿಗೆ ಹೋಲಿಸಿದರೆ, ಇವು ವೇಗವಾದ ಕೂಲಿಂಗ್, ಹೆಚ್ಚು ಬಾಳಿಕೆ ಮತ್ತು ಉತ್ತಮ ಪರಿಣಾಮಕತೆಯನ್ನು ನೀಡುತ್ತವೆ. ಹನಿಕೂಂಬ್ ಪ್ಯಾಡ್ ಅನ್ನು ಎಂಜಿನಿಯರಿಂಗ್ ಮಾಡಿದ ದಪ್ಪ ಸೆಲ್ಯುಲೋಸ್ ಕಾಗದದಿಂದ ತಯಾರಿಸಲಾಗುತ್ತದೆ, ಹಾಳಾಗುವುದನ್ನು ತಪ್ಪಿಸಲು ಇದಕ್ಕೆ ರಾಸಾಯನಿಕವಾಗಿ ಚಿಕಿತ್ಸೆ ನೀಡಲಾಗುತ್ತದೆ, ಇದರಿಂದಾಗಿ ಹೆಚ್ಚಿನ ಬಳಕೆಯ ಅವಧಿಯನ್ನು ಒದಗಿಸುತ್ತದೆ. ಕ್ರಾಸ್ ಫ್ಲೂಟೆಡ್, ಸಮವಿಲ್ಲದ ಆಂಗಲ್ ಪ್ಯಾಡ್ ವಿನ್ಯಾಸವು ಅತ್ಯುತ್ತಮವಾದ ತಂಪಾಗಿಸುವಿಕೆಗಾಗಿ ಗಾಳಿ ಮತ್ತು ನೀರನ್ನು ಮಿಶ್ರಮಾಡಲು ಒದಗಿಸಲಾಗಿದೆ.
-
F. ಸ್ಮಾರ್ಟ್ ಶೀಲ್ಡ್ ತಂತ್ರಜ್ಞಾನ ಎಂದರೇನು?
i. ಉಷಾ ಕೂಲರ್ ಗಳು ಈಗ ಎನ್9 ಪ್ಲಾಸ್ಟಿಕ್ಸ್ ನಿಂದ ಬೆಂಬಲಿಸಲ್ಪಡುವ ಸ್ಮಾರ್ಟ್ ಶೀಲ್ಡ್ ತಂತ್ರಜ್ಞಾನದೊಂದಿಗೆ ಬರುತ್ತವೆ. ಈ ಬೇಸಿಗೆಗಳು ತಾಜಾ, ಸುರಕ್ಷಿತ ಮತ್ತು ಆರೋಗ್ಯಕರವಾಗಿ ಇರುವುದನ್ನು ಈ ತಂತ್ರಜ್ಞಾನವು ಖಚಿತಪಡಿಸುತ್ತದೆ. ಈ ತಂತ್ರಜ್ಞಾನದಲ್ಲಿ ವಾಟರ್ ಟ್ಯಾಂಕ್ ಅನ್ನು ಆಂಟಿ-ಬ್ಯಾಕ್ಟೀರಿಯಾದ ಅಡಿಟಿವ್ ನಿಂದ ಸಂಸ್ಕರಿಸಲಾಗುತ್ತದೆ, ಇದು ಟ್ಯಾಂಕ್‌ನಲ್ಲಿ ಬ್ಯಾಕ್ಟೀರಿಯಾ ರಚನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಪಾಚಿ ಬೆಳವಣಿಗೆಯನ್ನು ಮಿತಿಗೊಳಿಸುತ್ತದೆ..
ii. ಇದು ಹೇಗೆ ಕೆಲಸ ಮಾಡುತ್ತದೆ?
ಎನ್9 ಪ್ಲಾಸ್ಟಿಕ್ಸ್ ಒಂದು ವಿಶಿಷ್ಟವಾದ ಸಂಯೋಜನೆಯಾಗಿದೆ. ಈ ಸಂಯೋಜನೆಯಲ್ಲಿರುವ ಸಿಲಿಕಾ ಐಯಾನ್ ಗಳನ್ನು ನಿಧಾನವಾಗಿ ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಈ ಐಯಾನ್ ಗಳು ಬ್ಯಾಕ್ಟೀರಿಯಾ ರೂಪುಗೊಳ್ಳುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಟ್ಯಾಂಕ್ ನಲ್ಲಿ ಪಾಚಿ ಬೆಳವಣಿಗೆಯನ್ನು ಮಿತಿಗೊಳಿಸುತ್ತದೆ.
iii. ಸೌಲಭ್ಯಗಳು
1. ಸುರಕ್ಷಿತ: ಆಂಟಿ-ಬ್ಯಾಕ್ಟೀರಿಯಾ - ವಾಟರ್ ಟ್ಯಾಂಕ್‌ನಲ್ಲಿ ಬ್ಯಾಕ್ಟೀರಿಯಾಗಳ ಬೆಳವಣಿಗೆಯಲ್ಲಿ 99% ನಷ್ಟು ಕಡಿತ, ಆದ್ದರಿಂದ ತಂಪಾದ ಗಾಳಿಯು ಸಾಮಾನ್ಯ ಟ್ಯಾಂಕ್ನೊಂದಿಗಿನ ಇತರ ಕೂಲರ್ಗಳಿಗೆ ಹೋಲಿಸಿದರೆ ಹೆಚ್ಚು ತಾಜಾ ಮತ್ತು ಸುರಕ್ಷಿತವಾಗಿದೆ.
2. ತಾಜಾ: ಪಾಚಿ ನಿರೋಧಕತೆ - ಪ್ಲಾಸ್ಟಿಕ್ ಟ್ಯಾಂಕ್ ನಲ್ಲಿ ಪಾಚಿ ಬೆಳವಣಿಗೆಯನ್ನು ಸೀಮಿತಗೊಳಿಸುವುದರಿಂದ ಅದು ಕೂಲರ್ ಅನ್ನು ಸ್ವಚ್ಛಾವಾಗಿರಲು ಮತ್ತು ಸಂಬಂಧಿತ ಕೆಟ್ಟ ವಾಸನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
3. ಆರೋಗ್ಯಕರ: ವಿಶೇಷ ಸ್ಮಾರ್ಟ್ ಶೀಲ್ಡ್ ಟೆಕ್ನಾಲಜಿಯು ಪ್ಲಾಸ್ಟಿಕ್ ಟ್ಯಾಂಕ್ನಲ್ಲಿನ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ ಮತ್ತು ಆ ಮೂಲಕ ಗಾಳಿಯನ್ನು ತಾಜಾ ಮತ್ತು ಸ್ವಚ್ಛವಾಗಿರಿಸುತ್ತದೆ.
-
G. ಫ್ಲೋಟ್ ವ್ಯಾಲ್ವ್ (ಆಟೊ ಫಿಲ್) ಹೇಗೆ ಕಾರ್ಯನಿರ್ವಹಿಸುತ್ತದೆ?
ಕೂಲರ್ ಟ್ಯಾಂಕ್ ಒಳಗೆ ಸ್ಥಾಪಿಸಲಾಗಿರುವ ಫ್ಲೋಟ್ ವ್ಯಾಲ್ವ್, ಒಂದು ಟೊಳ್ಳಾದ ಚೆಂಡನ್ನು ಹೋಲುವ ಸಾಧನವಾಗಿದೆ. ಪ್ರತಿ ಬಾರಿಯೂ ನೀರು ಕನಿಷ್ಠ ಮಟ್ಟಕ್ಕಿಂತ ಕೆಳಕ್ಕೆ ಇಳಿಯುವಾಗ, ವಾಟರ್ ಫ್ಲೋಟ್ ವ್ಯಾಲ್ವ್ ಅದನ್ನು ಪತ್ತೆ ಮಾಡುತ್ತದೆ ಮತ್ತು ಟ್ಯಾಂಕ್ ಒಳಗೆ ನೀರಿನ ಹರಿವನ್ನು ಪ್ರಾರಂಭಿಸುತ್ತದೆ; ಇದಕ್ಕೆ ಹೋಸ್ ಕನೆಕ್ಟರ್ ಮೂಲಕ ಟ್ಯಾಂಕ್ಗೆ ಹರಿಯುವ ನೀರಿನ ಪೈಪ್ ಅನ್ನು ಜೋಡಿಸಲಾಗಿರಬೇಕು. ಅದೇ ರೀತಿಯಲ್ಲಿ ನೀರು ಗರಿಷ್ಠ ಮಟ್ಟವನ್ನು ತಲುಪಿದಾಗ ಅದು ನೀರಿನ ಹರಿವನ್ನು ನಿಲ್ಲಿಸುತ್ತದೆ. ಇದು ಸ್ವಯಂಚಾಲಿತ ಪ್ರಕ್ರಿಯೆಯಾಗಿದೆ ಮತ್ತು ನೀರಿನ ಟ್ಯಾಂಕ್ ಅನ್ನು ಹಸ್ತಚಾಲಿತವಾಗಿ ತುಂಬುವ ಅಗತ್ಯವಿರುವುದಿಲ್ಲ.
ನಿರ್ವಹಣೆ ವಿಚಾರಣೆ
-
A. ಹನಿಕೂಂಬ್ ಪ್ಯಾಡ್ ಅನ್ನು ಯಾವಾಗ ಸ್ವಚ್ಛಗೊಳಿಸಬೇಕು?
- ಹನಿಕೂಂಬ್ ಮಾಧ್ಯಮಕ್ಕೆ ಶುಚಿಗೊಳಿಸುವ ಆವರ್ತನವು ಸ್ಥಳೀಯ ಗಾಳಿ ಮತ್ತು ನೀರಿನ ಪರಿಸ್ಥಿತಿಗಳನ್ನು ಅವಲಂಬಿಸಿರುತ್ತದೆ. ನೀರಿನ ಖನಿಜಾಂಶ ಹೆಚ್ಚಿರುವ ಪ್ರದೇಶಗಳಲ್ಲಿ, ಖನಿಜ ಅಂಶಗಳು ಹನಿಕೂಂಬ್ ಕೂಲಿಂಗ್ ಮಾಧ್ಯಮದಲ್ಲಿ ನಿರ್ಮಿತಗೊಳ್ಳಬಹುದು ಮತ್ತು ಗಾಳಿಯ ಹರಿವನ್ನು ನಿರ್ಬಂಧಿಸಬಹುದು.
- ನೀರನ್ನು ಬರಿದಾಗಿಸುವುದು ಮತ್ತು ವಾರಕ್ಕೊಮ್ಮೆಯಾದರೂ ಶುದ್ಧ ನೀರಿನಿಂದ ಪುನಃ ನೀರು ತುಂಬುವುದರಿಂದ ಖನಿಜ ಅಂಶಗಳು ನಿರ್ಮಾಣಗೊಳ್ಳುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹನಿಕೂಂಬ್ ಮಾಧ್ಯಮದಲ್ಲಿ ಖನಿಜ ಅಂಶಗಳು ಉಳಿದಿದ್ದರೆ, ಮಾಧ್ಯಮವನ್ನು ತೆಗೆದು ಶುದ್ಧ ನೀರಿನ ಅಡಿಯಲ್ಲಿ ತೊಳೆಯಬೇಕು.
- ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಪ್ರತಿ ಎರಡು ತಿಂಗಳಿಗೊಮ್ಮೆ ಅಥವಾ ಅದಕ್ಕಿಂತ ಬೇಗನೇ, ಮಾಧ್ಯಮವನ್ನು ಸ್ವಚ್ಛಗೊಳಿಸಬೇಕು.
-
B. ಹನಿಕೂಂಬ್ ಪ್ಯಾಡ್ ಅನ್ನು ಹೇಗೆ ಸ್ವಚ್ಛಗೊಳಿಸುವುದು?
- ಯುನಿಟ್ ಆಫ್ ಮಾಡಿ, ಮತ್ತು ವಾಲ್ ಔಟ್‌ಲೆಟ್‌ನಿಂದ ಪವರ್ ಕಾರ್ಡ್ ಅನ್ನು ಅನ್‌ಪ್ಲಗ್ ಮಾಡಿ, ಯೂನಿಟ್ ಹಿಂಭಾಗವನ್ನು ಮುಂದಕ್ಕೆ ತಿರುಗಿಸಿ ಮತ್ತು ಹಿಂದಿನ ಗ್ರಿಲ್ ಅನ್ನು ನೋಡಿ
- ಸ್ಕ್ರೂ ಡ್ರೈವರ್ ನೊಂದಿಗೆ ಸ್ಕ್ರೂ ಗಳನ್ನು ತೆಗೆದುಹಾಕಿ.
- ಹಿಂಭಾಗದ ಗ್ರಿಲ್ ಫಲಕವನ್ನು ಸಂಪೂರ್ಣವಾಗಿ ತೆಗೆಯುವವರೆಗೆ ಅದನ್ನು ಮೇಲಕ್ಕೆ ಎಳೆಯಿರಿ. ಈಗ, ಹನಿಕೂಂಬ್ ಮಾಧ್ಯಮವನ್ನು ನೀವು ನೋಡಬಹುದು. ಹನಿಕೂಂಬ್ ಮಾಧ್ಯಮವನ್ನು ಶುದ್ಧ ನೀರಿನಿಂದ ಸ್ವಚ್ಛಗೊಳಿಸಿ.
- ಒಮ್ಮೆ ಶುಚಿಗೊಳಿಸುವಿಕೆಯು ಪೂರ್ಣಗೊಂಡ ನಂತರ, ಯೂನಿಟ್ ಮತ್ತೆ ಜೋಡಿಸಿ
- ವಿದ್ಯುತ್ ಸರಬರಾಜಿಗೆ ಪ್ಲಗ್ ಮಾಡಿ ಮತ್ತು ಯೂನಿಟ್ ಅನ್ನು ಆನ್ ಮಾಡಿ.
-
C. ಟ್ಯಾಂಕ್ ಅನ್ನು ಸ್ವಚ್ಛಗೊಳಿಸುವುದು ಹೇಗೆ?
- ವಿದ್ಯುತ್ “ಆಫ್” ಮಾಡಿ ಮತ್ತು ವಿದ್ಯುತ್ ಸರಬರಾಜಿನಿಂದ ಏರ್ ಕೂಲರ್ ಸಂಪರ್ಕ ತೆಗೆದುಹಾಕಿ.
- ಯೂನಿಟ್ ಅನ್ನು ಬರಿದು ಮಾಡಬಹುದಾದ ಸ್ಥಳಕ್ಕೆ ಯೂನಿಟ್ ಅನ್ನು ಸರಿಸಿ. ವಾಟರ್ ಡ್ರೈನ್ ಪ್ಲಗ್‌ನಿಂದ ಕ್ಯಾಪ್ ಅನ್ನು ತೆಗೆದುಹಾಕಿ (ಇದು ಟ್ಯಾಂಕ್‌ನ ಕೆಳಭಾಗದಲ್ಲಿದೆ) ಮತ್ತು ಟ್ಯಾಂಕ್ ಖಾಲಿಯಾಗಲು ಅನುಕೂಲಿಸಿ
- ನೀವು ನೀರಿನ ಟ್ಯಾಂಕ್ ಅನ್ನು ಬರಿದು ಮಾಡಿದ ನಂತರ, ದಯವಿಟ್ಟು ವಾಟರ್ ಡ್ರೈನ್ ಪ್ಲಗ್ ಅನ್ನು ಅದರ ಮೂಲ ಸ್ಥಾನಕ್ಕೆ ಸಂಪರ್ಕಿಸಿ.
- ಈಗ ವಾಟರ್ ಟ್ಯಾಂಕ್ ಅನ್ನು ಗರಿಷ್ಠ ಹಂತದವರೆಗೆ ಪುನಃ ತುಂಬಿಸಿ, 5 ನಿಮಿಷ ಕಾಯಿರಿ. ನಂತರ ಇಡೀ ನೀರನ್ನು ಮತ್ತೊಮ್ಮೆ ಹೊರಹಾಕಿ. ಈ ವಿಧಾನಕ್ಕಾಗಿ ಶುದ್ಧ ನೀರನ್ನು ಬಳಸಿ, ಇದರಿಂದ ಗರಿಷ್ಠ ಧೂಳಿನ ಕಣಗಳು ಮತ್ತು ಮಾಲಿನ್ಯಕಾರಕಗಳನ್ನು ಸಂಪೂರ್ಣವಾಗಿ ತೆಗೆದುಹಾಕಲ್ಪಡುತ್ತವೆ.
- v. ನಿಮ್ಮ ಕೂಲರ್ ಅನ್ನು ದೀರ್ಘಕಾಲದವರೆಗೆ ಬಳಸದಿದ್ದರೆ, ಅದನ್ನು ಮತ್ತೆ ಬಳಸುವ ಮೊದಲು, ವಾಟರ್ ಟ್ಯಾಂಕ್ ಅನ್ನು ಕನಿಷ್ಠ 2 ಬಾರಿ ಸ್ವಚ್ಛಗೊಳಿಸಲು ಸೂಚಿಸಲಾಗುತ್ತದೆ.
ಟ್ರಬಲ್‌ಶೂಟಿಂಗ್ (ರಿಪೇರಿ) ಮಾರ್ಗದರ್ಶಿ
-
A. ಗಾಳಿಯು ಬೀಸದಿದ್ದರೆ ಏನು ಮಾಡಬೇಕು?
- ವಿದ್ಯುತ್ ಕಾರ್ಡ್ ಪ್ಲಗ್ ಇನ್ ಮಾಡಲಾಗಿದೆಯೇ ಎಂದು ಪರಿಶೀಲಿಸಿ- - ವಿದ್ಯುತ್ ಕಾರ್ಡ್ ಪ್ಲಗ್ ಇನ್ ಮಾಡಲಾಗಿದೆ ಮತ್ತು ವಿದ್ಯುತ್ ಸರಬರಾಜು ಆನ್ ಆಗಿದೆಯೆ ಎಂದು ಖಚಿತಪಡಿಸಿಕೊಳ್ಳಿ
- ವಿದ್ಯುತ್ ಆನ್ ಆಗಿಲ್ಲ - ಕಂಟ್ರೋಲ್ ಪ್ಯಾನಲ್ ನ ಯಾಂತ್ರಿಕ ನಾಬ್ ಸ್ಥಾನವನ್ನು ಬದಲಾಯಿಸುವ ಮೂಲಕ ಯೂನಿಟ್ ಅನ್ನು ಆನ್ ಮಾಡಿ.
- ಮೋಟಾರ್ ದೋಷ-- ಸೇವಾ ಕೇಂದ್ರವನ್ನು ಸಂಪರ್ಕಿಸಿ
-
B. ಕೂಲರ್ ಶಬ್ದ ಮಾಡುತ್ತಿದ್ದರೆ / ಕೂಲಿಂಗ್ ಮಾಡದಿದ್ದರೆ ಏನು ಮಾಡಬೇಕು?
- ಕಂಟ್ರೋಲ್ ಪ್ಯಾನಲ್ ನಲ್ಲಿ ಪಂಪ್ ಆನ್ ಆಗಿಲ್ಲವೇ ಎಂದು ಪರಿಶೀಲಿಸಿ - ಕಂಟ್ರೋಲ್ ಪ್ಯಾನೆಲ್‌ನಲ್ಲಿಕೂಲ್ ಫಂಕ್ಷನ್ ಅನ್ನು “ಆನ್” ಗೆ ತಿರುಗಿಸಿ
- ನೀರಿನ ಮಟ್ಟ ಕಡಿಮೆ ಇದೆಯೇ ಅಥವಾ ಟ್ಯಾಂಕ್‌ನಲ್ಲಿ ನೀರಿಲ್ಲವೇ ಎಂದು ಪರಿಶೀಲಿಸಿ.- COOL ಅನ್ನು ಆಯ್ಕೆ ಮಾಡಿದಾಗ ಪಂಪ್ ಆನ್ ಆಗುತ್ತದೆ ಮತ್ತು ಟ್ಯಾಂಕ್ ನಲ್ಲಿ ನೀರು ಕಡಿಮೆ ಇದ್ದರೆ ಅಥವಾ ನೀರು ಇಲ್ಲದಿದ್ದರೆ ಪಂಪ್ ಶಬ್ದ ಮಾಡುತ್ತದೆ. ಈ ಸನ್ನಿವೇಶದಲ್ಲಿ ವಾಟರ್ ಟ್ಯಾಂಕ್ ಅನ್ನು ಪುನಃ ತುಂಬಿಸಿ.
- ಪಂಪ್ ಹಾನಿಯಾಗಿದೆಯೇ ಎಂದು ಪರಿಶೀಲಿಸಿ - ರಿಪೇರಿಗಾಗಿ ಸೇವಾ ಕೇಂದ್ರವನ್ನು ಸಂಪರ್ಕಿಸಿ
-
C. ಕೂಲರ್ ನಿಂದ ಕೆಟ್ಟ ವಾಸನೆ / ದುರ್ವಾಸನೆ ಬರುತ್ತಿದ್ದರೆ ಏನು ಮಾಡಬೇಕು?
- ಕೂಲರ್ ಹೊಸದಾಗಿರುವಾಗ - ಇದು ಸಾಮಾನ್ಯವಾಗಿ ಸಂಭವಿಸುತ್ತದೆ. ಯೂನಿಟ್ ಅನ್ನು ಮೊದಲ ಬಾರಿಗೆ ಬಳಸಿದಾಗ, ಹನಿಕೂಂಬ್ ಕೂಲಿಂಗ್ ಮಾಧ್ಯಮವು ವಾಸನೆಯನ್ನು ಹೊಂದಿರುತ್ತದೆ, ಇದು ಆರಂಭಿಕ ಬಳಕೆಯ ಒಂದು ವಾರದೊಳಗೆ ಹೊರಟುಹೋಗುತ್ತದೆ
- ಕೂಲರ್ ಅನ್ನು ಬಳಸಿದ್ದರೆ. - ಪಾಚಿ ಸಮಸ್ಯೆ ಇರಬಹುದು.
ಈ ಸಮಸ್ಯೆಯನ್ನು ಪರಿಹರಿಸಲು:
1. ಟ್ಯಾಂಕ್ ನಲ್ಲಿರುವ ನೀರಿನ ಸ್ಥಿತಿಯನ್ನು ಪರಿಶೀಲಿಸಿ. ನೀರು ಹಳೆಯದಾಗಿದ್ದರೆ ಟ್ಯಾಂಕ್ ಅನ್ನು ಸ್ವಚ್ಛಗೊಳಿಸಿ ಮತ್ತು ಶುದ್ಧ ನೀರಿನಿಂದ ತುಂಬಿಸಿ
2. ಹನಿಕೂಂಬ್ ಕೂಲಿಂಗ್ ಮಾಧ್ಯಮವನ್ನು ಸ್ವಚ್ಛಗೊಳಿಸಿ
3. ಸಮಸ್ಯೆ ಮುಂದುವರಿದರೆ ಸೇವಾ ಕೇಂದ್ರವನ್ನು ಸಂಪರ್ಕಿಸಿ
ಸುರಕ್ಷತೆ ಮತ್ತು ವಾರಂಟಿ
-
A. ವಾರಂಟಿಯ ಮಾನ್ಯತೆ
- ಸೂಚನಾ ಕೈಪಿಡಿಗೆ ಅನುಗುಣವಾಗಿ ಉಪಕರಣವನ್ನು ಸ್ಥಾಪಿಸಲಾಗಿದೆ, ಬಳಸಲಾಗಿದೆ ಮತ್ತು ನಿರ್ವಹಿಸಲಾಗಿದೆ.
- ಅಧಿಕೃತ ವ್ಯಾಪಾರಿ ಸಹಿ ಮಾಡಿದ ವಾರಂಟಿ ಕಾರ್ಡ್ ಮತ್ತು ಕ್ಯಾಶ್ ಮೆಮೊ ಅನ್ನು ದೂರಿನೊಂದಿಗೆ ನೀಡಲಾಗಿದೆ.
- ಯಾವುದೇ ಅನಧಿಕೃತ ವ್ಯಕ್ತಿಯಿಂದ ಉಪಕರಣವನ್ನು ತೆರೆಯಲಾಗಿಲ್ಲ ಅಥವಾ ಹಾಳು ಮಾಡಿಲ್ಲ.
-
B. ವಾರಂಟಿ ಯಾವಾಗ ಅನ್ವಯಿಸುವುದಿಲ್ಲ?
- ಕಿತ್ತುಹೋಗುವುದು, ಸಿಪ್ಪೆಸುಲಿಯುವುದು, ಲೇಪನ ಮತ್ತು ಡೆಂಟಿಂಗ್‌ನಿಂದ ಉಂಟಾಗುವ ಹಾನಿ.
- ಬೇಕಲೈಟ್, ಯೂರಿಯಾ, ಎಬಿಎಸ್, ಎಸ್‌ಎಎನ್ ಮತ್ತು ಅಂತಹ ಪ್ಲಾಸ್ಟಿಕ್ ವಸ್ತುಗಳಿಂದ ಮಾಡಲ್ಪಟ್ಟ ವಸ್ತುಗಳು, ರಬ್ಬರ್ ಭಾಗಗಳು ಮತ್ತು ಕಾರ್ಡ್.
- ಭಾಗಗಳ ಸಾಮಾನ್ಯ ಸವೆತ.
- ಅಪಘಾತಗಳು, ತಪ್ಪಾಗಿ ನಿರ್ವಹಿಸುವುದು ಅಥವಾ ಗ್ರಾಹಕರ ನಿರ್ಲಕ್ಷ್ಯದಿಂದ ಉಂಟಾಗುವ ಹಾನಿ
-
C. ಸುರಕ್ಷತಾ ಸಲಹೆಗಳು
- ನಿಮ್ಮ ಕೂಲರ್ 230 ವೋಲ್ಟ್ ಎಸಿ, 50 ಹರ್ಟ್ಸ್ ನಲ್ಲಿ ಚಲಿಸುತ್ತದೆ. ಮನೆಯ ವೋಲ್ಟೇಜ್ ಉಪಕರಣದ ರೇಟೆಡ್ ನಿರ್ದಿಷ್ಟ್ಯತೆಗೆ ಹೊಂದಿಕೆಯಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ.
- ಉತ್ಪನ್ನವನ್ನು ನಿರ್ವಹಿಸುವ ಮೊದಲು ಅದನ್ನು ಅದರ ಪ್ಯಾಕೇಜಿಂಗ್‌ನಿಂದ ತೆಗೆಯಿರಿ ಮತ್ತು ಅದು ಉತ್ತಮ ಸ್ಥಿತಿಯಲ್ಲಿದೆ ಎಂದು ಪರಿಶೀಲಿಸಿ.
- ಹಾನಿಗೊಳಗಾದ ಕಾರ್ಡ್ ಅಥವಾ ಪ್ಲಗ್‌ನೊಂದಿಗೆ ಯಾವುದೇ ಉತ್ಪನ್ನವನ್ನು ನಿರ್ವಹಿಸಬೇಡಿ. ಈ ಉಪಕರಣದೊಂದಿಗೆ ಎಕ್ಸ್‌ಟೆನ್ಶನ್ ಕಾರ್ಡ್ ಬಳಸದಂತೆ ನಾವು ಶಿಫಾರಸು ಮಾಡುತ್ತೇವೆ.
- ಕಾರ್ಪೆಟ್ ಅಡಿಯಲ್ಲಿ ಪವರ್ ಕಾರ್ಡ್ ಅನ್ನು ಹಾಕಬೇಡಿ, ಅಥವಾ ಅದನ್ನು ರಗ್ಗುಗಳು ಅಥವಾ ರನ್ನರ್ ಗಳಿಂದ ಮುಚ್ಚಬೇಡಿ. ಕಾರ್ಡ್ ಗಳು ಕಾಲಿಗೆ ಸಿಕ್ಕಿ ಎಡವಿ ಬೀಳುವ ಪ್ರದೇಶಗಳಿಂದ ದೂರವಿಡಿ.
- ವಾಟರ್ ಟ್ಯಾಂಕ್ ಅನ್ನು ಪುನಃ ತುಂಬಿಸುವ ಮೊದಲು ಉತ್ಪನ್ನವನ್ನು ಯಾವಾಗಲೂ ಅನ್‌ಪ್ಲಗ್ ಮಾಡಿ.
- ಯೂನಿಟ್ ಅನ್ನು ಸ್ವಚ್ಛಗೊಳಿಸುವ, ಸರ್ವೀಸ್ ಮಾಡುವ ಅಥವಾ ಸ್ಥಳಾಂತರಿಸುವ ಮೊದಲು ವಿದ್ಯುತ್ ಮೂಲದಿಂದ ಉಪಕರಣವನ್ನು ಯಾವಾಗಲೂ ಅನ್‌ಪ್ಲಗ್ ಮಾಡಿ.
- ಪವರ್ ಕಾರ್ಡ್ ಪ್ಲಗ್-ತುದಿಯನು ಅನ್ನು ಮಾತ್ರ ಹಿಡಿದುಕೊಂಡು ಎಳೆಯುವ ಮೂಲಕ ವಿದ್ಯುತ್ ಸ್ವೀಕರಿಸುವ ಪವರ್ ಕಾರ್ಡ್ ತೆಗೆಯಿರಿ; ಕಾರ್ಡನ್ನು ಎಂದಿಗೂ ಹಿಡಿದು ಎಳೆಯಬೇಡಿ.
- ಗ್ಯಾಸೋಲಿನ್, ಬಣ್ಣ ಅಥವಾ ಇತರ ಸುಡುವ ಸರಕುಗಳು ಮತ್ತು ವಸ್ತುಗಳು ಸಂಗ್ರಹವಾಗಿರುವ ಪ್ರದೇಶಗಳಲ್ಲಿ ಉತ್ಪನ್ನವನ್ನು ಬಳಸಬೇಡಿ.
- ‘‘ಕೂಲ್’’ ಸೆಟ್ಟಿಂಗ್ ಬಳಸುವಾಗ, ವಾಟರ್ ಟ್ಯಾಂಕ್ ತುಂಬಿದೆ ಎಂದು ಖಚಿತಪಡಿಸಿಕೊಳ್ಳಿ. ಖಾಲಿ ಟ್ಯಾಂಕ್ ನೊಂದಿಗೆ ‘ಕೂಲ್’ ಸೆಟ್ಟಿಂಗ್ ಲ್ಲಿ ಈ ಕೂಲರ್ ಅನ್ನು ಕಾರ್ಯಾಚರಣೆ ಮಾಡುವುದರಿಂದ ನೀರಿನ ಪಂಪ್‌ಗೆ ಹಾನಿಯಾಗಬಹುದು.
- . ಕೂಲರ್‌ನ ಯಾವುದೇ ವಿದ್ಯುತ್ ಅಥವಾ ಯಾಂತ್ರಿಕ ಕಾರ್ಯಗಳನ್ನು ಸರಿಪಡಿಸಲು ಅಥವಾ ಹೊಂದಿಸಲು ಪ್ರಯತ್ನಿಸಬೇಡಿ, ಏಕೆಂದರೆ ಇದು ವಾರಂಟಿಯನ್ನು ರದ್ದುಗೊಳಿಸಬಹುದು.
- ಉಪಕರಣದ ಗಾಳಿಯ ಇನ್‌ಲೆಟ್ ಅಥವಾ ಔಟ್‌ಲೆಟ್ ಅನ್ನು ಮುಚ್ಚಬೇಡಿ ಏಕೆಂದರೆ ಇದು ಮೋಟರ್ ಹಾನಿಗೆ ಕಾರಣವಾಗಬಹುದು
- ಯಾವುದೇ ವೆಂಟಿಲೇಶನ್ ಅಥವಾ ಎಗ್ಸಾಸ್ಟ್ ಮೂಲಕ ವಸ್ತುಗಳನ್ನು ಹಾಕಬೇಡಿ ಏಕೆಂದರೆ ಇದು ಉತ್ಪನ್ನವನ್ನು ಹಾನಿಗೊಳಿಸಬಹುದು ಮತ್ತು ವಿದ್ಯುತ್ ಆಘಾತ ಅಥವಾ ಬೆಂಕಿಗೆ ಕಾರಣವಾಗಬಹುದು.
- ಹನಿಕೂಂಬ್ ಮಾಧ್ಯಮ ತೆಗೆದಿರುವಾಗ ಕಾರ್ಯನಿರ್ವಹಿಸಬೇಡಿ ಏಕೆಂದರೆ ಇದು ಮೋಟರ್ ಅನ್ನು ಓವರ್ ಲೋಡ್ ಮಾಡುತ್ತದೆ ಮತ್ತು ಹಾನಿಗೊಳಿಸುತ್ತದೆ.
- ಕೆಲಸ ಮಾಡುತ್ತಿರುವ ಅಉಪಕರಣವನ್ನು ದೀರ್ಘಕಾಲದವರೆಗೆ ಗಮನಿಸದೆ ಬಿಡಬೇಡಿ.
- ಈ ಉಪಕರಣ, ಪ್ಯಾಕೇಜಿಂಗ್ ಅಥವಾ ಪ್ಲಾಸ್ಟಿಕ್ ಚೀಲಗಳೊಂದಿಗೆ ಮಕ್ಕಳನ್ನು ಆಡಲು ಬಿಡಬೇಡಿ.
- ಘಟಕವು ಹಾನಿಗೊಳಗಾಗಿದ್ದರೆ ಅಥವಾ ಅದು ಅಸಮರ್ಪಕವಾಗಿ ಕಾರ್ಯಮಾಡುತ್ತಿದ್ದರೆ, ಅದನ್ನು ಬಳಸುವುದನ್ನು ಮುಂದುವರಿಸಬೇಡಿ. ಟ್ರಬಲ್‌ಶೂಟಿಂಗ್ ವಿಭಾಗವನ್ನು ನೋಡಿ ಮತ್ತು ವೃತ್ತಿಪರ ಸಲಹೆಯನ್ನು ಪಡೆಯಿರಿ.
- ಒಂದು ಸಮವಾದ ನೆಲದ ಮೇಲೆ ಯೂನಿಟ್ ಅನ್ನು ಇರಿಸಿ. ಈ ಉತ್ಪನ್ನವು ತೇವ ಅಥವಾ ಒದ್ದೆಯಾದ ಸ್ಥಳಗಳಲ್ಲಿ ಬಳಸಲು ಉದ್ದೇಶಿಸಿಲ್ಲ.
- ಬಾತ್ ರೂಮ್ ಗಳಲ್ಲಿ ಇದನ್ನು ಬಳಸಬೇಡಿ. ಉತ್ಪನ್ನವು ನೀರಿನ ಪಾತ್ರೆಯಲ್ಲಿ ಬೀಳುವಂತಹ ಸ್ಥಳದಲ್ಲಿ ಇದನ್ನು ಎಂದಿಗೂ ಇಡಬೇಡಿ.
- ಬಳಕೆಯಲ್ಲಿ ಇಲ್ಲದಿದ್ದಾಗ ಒಣಗಿರುವ ಪ್ರದೇಶದಲ್ಲಿ ಶೇಖರಿಸಿ. ಈ ಉಪಕರಣವು ಕಡಿಮೆ ದೈಹಿಕ, ಸಂವೇದನಾಶೀಲ ಅಥವಾ ಮಾನಸಿಕ ಸಾಮರ್ಥ್ಯಗಳು, ಅಥವಾ ಅನುಭವ ಮತ್ತು ಜ್ಞಾನದ ಕೊರತೆಯಿರುವ ವ್ಯಕ್ತಿಗಳ (ಮಕ್ಕಳು ಅಥವಾ ವೃದ್ಧರು ಸೇರಿದಂತೆ) ಬಳಕೆಗೆ ಉದ್ದೇಶಿಸಿಲ್ಲ; ಅವರಿಗೆ ಒಬ್ಬ ಜವಾಬ್ದಾರಿಯುತ ವ್ಯಕ್ತಿಯು ಉಪಕರಣದ ಬಳಕೆಯ ಬಗ್ಗೆ ಮೇಲ್ವಿಚಾರಣೆ ಅಥವಾ ಸೂಚನೆಗಳನ್ನು ನೀಡಲಾಗಿಲ್ಲದಿದ್ದರೆ ಇಂಥವರು ಇದನ್ನು ಸುರಕ್ಷತೆಯ ವಿಷಯದಿಂದ ಬಳಸಲೇ ಬಾರದು.
- ಕೂಲರ್ ಅನ್ನು ಸರಿಸಲು ಯಾವಾಗಲೂ ಸೈಡ್ ಹ್ಯಾಂಡಲ್‌ಗಳನ್ನು ಹಿಡಿಯಿರಿ.